ಎಲಿಜಬೆತ್ ಜಾನೆ ಹರ್ಲಿ (೧೯೬೫ರ ಜೂನ್ ೧೦ರಂದು ಜನಿಸಿದರು) ಒಬ್ಬ ಇಂಗ್ಲಿಷ್ ರೂಪದರ್ಶಿ ಮತ್ತು ನಟಿ, ಈಕೆ ೧೯೯೦ರಲ್ಲಿ ಹಘ್ ಗ್ರ್ಯಾಂಟ್‌ನ ಪ್ರೇಯಸಿಯೆಂದು ಜನಪ್ರಿಯವಾದರು. ೧೯೯೪ರಲ್ಲಿ, ಗ್ರ್ಯಾಂಟ್‌ನ ಫೋರ್ ವೆಡ್ಡಿಂಗ್ಸ್ ಆಂಡ್ ಎ ಫನರಲ್ ಚಲನಚಿತ್ರವು ಜಾಗತಿಕವಾಗಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದರಿಂದ ಆತನು ಪ್ರಪಂಚದಾದ್ಯಂತದ ಮಾಧ್ಯಮದ ಕೇಂದ್ರಬಿಂದುವಾದ್ದರಿಂದ, ಹರ್ಲಿಯು ಲಾಸ್ ಏಂಜಲೀಸ್‌ನಲ್ಲಿನ ಈ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಚಿನ್ನದ ಸೇಫ್ಟಿ ಪಿನ್‌ಗಳಿಂದ ಸೇರಿಸಿದ ಕೆಳಮಟ್ಟದವರೆಗೆ ಇಳಿಬಿಟ್ಟ ವರ್ಸೇಸ್ ಉಡುಪನ್ನು ಧರಿಸಿಕೊಂಡು ಆತನೊಂದಿಗೆ ಜತೆಗೂಡಿದರು, ಈ ಉಡುಪಿನಿಂದಾಗಿ ಆಕೆಯು ಮಾಧ್ಯಮದ ಗಮನವನ್ನು ಸೆಳೆದರು. ಹರ್ಲಿ ಪ್ರಸಾಧನ ವಸ್ತುಗಳ ಕಂಪನಿ ಎಸ್ಟೀ ಲಾಡರ್‌ಗಾಗಿ ಸುಮಾರು ಹದಿನೈದು ವರ್ಷಗಳಿಂದ ಕೆಲಸ ಮಾಡಿದ್ದರು, ಆ ಕಂಪನಿಯಲ್ಲಿ ಆಕೆಯು ತನ್ನ ೨೯ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಾಡೆಲಿಂಗ್‌ನಲ್ಲಿ ಉದ್ಯೋವನ್ನು ಪಡೆದಿದ್ದರು. ಆ ಕಂಪನಿಯು ಆಕೆಯನ್ನು ೧೯೯೫ರಿಂದ ಅದರ ಉತ್ಪನ್ನಗಳಿಗೆ, ವಿಶೇಷವಾಗಿ ಸೆನ್ಸುಯಸ್, ಇಂಟ್ಯೂಶನ್ ಮತ್ತು ಪ್ಲೆಶರ್ಸ್ ಮೊದಲಾದ ಸುಗಂಧ-ದ್ರವ್ಯಗಳಿಗೆ, ಒಬ್ಬ ಪ್ರತಿನಿಧಿ ಮತ್ತು ರೂಪದರ್ಶಿಯಾಗಿ ನೇಮಿಸಿಕೊಂಡಿತು. ನಟಿಯಾಗಿ ಆಕೆಯ ಜನಪ್ರಿಯ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಗಳೆಂದರೆ ಮೈಕ್ ಮಿಯರ್ಸ್‌ನ ಪ್ರಸಿದ್ಧ ಗೂಢಚಾರ-ಕಾಮಿಡಿಗಳಲ್ಲಿನ ವ್ಯಾನೆಸ್ಸಾ ಕೆನ್ಸಿಂಗ್ಟನ್ ಪಾತ್ರ, : (೧೯೯೭) ಮತ್ತು ಬೆಡಾಜ್ಲೆಡ್ ‌ನಲ್ಲಿನ ಭೂತದ ಪಾತ್ರ (೨೦೦೦). ಹರ್ಲಿ ಪ್ರಸ್ತುತ ನಾಮಸೂಚಕ ಕಿನಾರೆ ಉಡುಪಿನ ನಮೂನೆಯೊಂದನ್ನು ಸ್ವಂತವಾಗಿ ಹೊಂದಿದ್ದಾರೆ. == ಬಾಲ್ಯ ಜೀವನ == ಹರ್ಲಿಯು ಹ್ಯಾಂಪ್ಶೈರ್‌ನ ಬ್ಯಾಸಿಂಗ್‌ಸ್ಟಾಕ್‌ನಲ್ಲಿ ಏಂಜೆಲಾ ಮೇರಿ (ನೀ ಟಿಟ್ಟ್) ಮತ್ತು ರಾಯ್ ಲಿಯೊನಾರ್ಡ್ ಹರ್ಲಿ ದಂಪತಿಗಳ ಕಿರಿಯ ಮಗಳಾಗಿ ಜನಿಸಿದರು. ಆಕೆಯ ಐರಿಷ್ ತಂದೆ ಬ್ರಿಟಿಷ್ ಸೈನ್ಯದಲ್ಲಿ ಮೇಜರ್ ಆಗಿದ್ದರು; ಆಕೆಯ ಆಂಗ್ಲಿಕನ್ ತಾಯಿ ಕೆಂಪ್‌ಶಾಟ್ ಇನ್‌ಫ್ಯಾಂಟ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಆಕೆ ಕ್ಯಾಟೆ ಹೆಸರಿನ ಒಬ್ಬ ಅಕ್ಕ ಮತ್ತು ಮೈಕೆಲ್ ಜೇಮ್ಸ್ ಹರ್ಲಿ ಹೆಸರಿನ ಒಬ್ಬ ತಮ್ಮನನ್ನು ಹೊಂದಿದ್ದಾರೆ. ಹರ್ಲಿ ಕೆಂಪ್‌ಶಾಟ್ ಇನ್‌ಫ್ಯಾಂಟ್ ಸ್ಕೂಲ್, ಕೆಂಪ್‌ಶಾಟ್ ಜೂನಿಯರ್ ಸ್ಕೂಲ್ ಮತ್ತು ಹ್ಯಾರಿಯಟ್ ಕಾಸ್ಟೆಲ್ಲೊ ಸ್ಕೂಲ್ ಮೊದಲಾದ ಸ್ಥಳೀಯ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದರು. ಸಣ್ಣವಳಿದ್ದಾಗಲೇ ನೃತ್ಯಗಾರ್ತಿಯಾಗಬೇಕೆಂಬ ಆಶಯದಿಂದ, ಆಕೆ ಬ್ಯಾಲೆ-ನೃತ್ಯ ತರಗತಿಯನ್ನು ಸೇರಿಕೊಂಡರು. ನಂತರ ಲಂಡನ್ ಸ್ಟುಡಿಯೊ ಸೆಂಟರ್‌ನಲ್ಲಿ ನೃತ್ಯ ಮತ್ತು ನಾಟಕ ಕಲೆಯನ್ನು ಸಂಕ್ಷೇಪವಾಗಿ ಕಲಿತುಕೊಂಡರು. ಹದಿಹರೆಯದಲ್ಲಿ ಆಕೆ ಪಂಕ್ ಫ್ಯಾಷನ್‌ನಲ್ಲಿ ತೊಡಗಿದರು, ತನ್ನ ತಲೆಗೂದಲಿಗೆ ಗುಲಾಬಿ ಬಣ್ಣವನ್ನು ಬಳಿದುಕೊಂಡರು ಮತ್ತು ಮೂಗು ಚುಚ್ಚಿಕೊಂಡರು. 'ನಾನು ೧೬ ವರ್ಷ ವಯಸ್ಸಿನವಳಾಗಿದ್ದಾಗ, ಸುಮಾರು ೧೯೮೧ ಅಥವಾ ೧೯೮೨ರಲ್ಲಿ ನಾನು ಬೆಳೆದ ಉಪನಗರ ಬ್ಯಾಸಿಂಗ್‌ಸ್ಟೋಕ್‌ನಲ್ಲಿದ್ದಾಗ ನಾನು ಅಪ್ರಯೋಜಕಳಾಗಿದ್ದೆನು' ಎಂದು ಆಕೆ ಹೇಳಿದ್ದಾರೆ. ಆಕೆ ಯೌವನಾವಸ್ಥೆಯಲ್ಲಿ ನ್ಯೂ ಏಜ್ ಟ್ರಾವೆಲ್ಲರ್ಸ್‌ ಒಂದಿಗೆ ಸಂಬಂಧಿಸಿದ್ದರು. == ವೃತ್ತಿಜೀವನ == ಹರ್ಲಿ ೧೯೮೦ರ ಉತ್ತರಾರ್ಧದಲ್ಲಿ ನಟಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದರು ಮತ್ತು ಆಕೆ ೧೯೯೫ರಲ್ಲಿ ರೂಪದರ್ಶಿಯಾದರು. ೨೦೦೦ರ ದಶಕದಲ್ಲಿ, ಆಕೆ ಬ್ರಿಟನ್‌ನಲ್ಲಿ ಒಬ್ಬ ರಿಯಾಲಿಟಿ ಟೆಲಿವಿಷನ್ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು. === ಫ್ಯಾಷನ್ === ೧೯೯೫ರಲ್ಲಿ, ಹಿಂದಿನ ಯಾವುದೇ ಮಾಡೆಲಿಂಗ್ ಅನುಭವವಿಲ್ಲದೆ ಹರ್ಲಿ ಎಸ್ಟೀ ಲಾಡರ್ ರೂಪದರ್ಶಿಯಾಗಿ ಪರಿಚಯಿಸಲ್ಪಟ್ಟರು. ನಂತರ ಆಕೆ ಹೀಗೆಂದು ಹೇಳಿಕೊಂಡಿದ್ದಾರೆ - 'ನಾನು ನನ್ನ ಮೊದಲ ಮಾಡೆಲಿಂಗ್ ಉದ್ಯೋಗವನ್ನು ೨೯ನೇ ವಯಸ್ಸಿನಲ್ಲಿ ಮಾಡಿದುದರಿಂದ, ಅಷ್ಟು ಹೊತ್ತಿಗೆ ನಾನು ಮುಗ್ಧತೆಯಿಂದ ತುಂಬಾ ದೂರಕ್ಕೆ ಸಾಗಿದ್ದೆನು.' ಅಂದಿನಿಂದ ಹರ್ಲಿ ಲಾಡರ್‌ನ 'ಪ್ಲೆಸರ್ಸ್', 'ಬ್ಯೂಟಿಫುಲ್', 'ಡ್ಯಾಜ್ಲಿಂಗ್', 'ಟಸ್ಕ್ಯಾನಿ ಪರ್ ಡೊನ್ನಾ' ಮತ್ತು 'ಸೆನ್ಸುಯಸ್' ಮೊದಲಾದ ಸುಗಂಧ-ದ್ರವ್ಯಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಆಕೆ ಈ ಕಂಪನಿಯ ಇತರ ಪ್ರಸಾಧನ-ವಸ್ತುಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು. ೨೦೦೧ರಲ್ಲಿ ಎಸ್ಟೀ ಲಾಡರ್‌ನಲ್ಲಿನ ಆಕೆಯ ಸ್ಥಾನವನ್ನು ಕ್ಯಾರೊಲಿನ್ ಮರ್ಫಿ ಆಕ್ರಮಿಸಿಕೊಂಡರು. ಆದರೂ ಆಕೆ ಈ ಕಂಪನಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ, ಆಕೆ ೨೦೧೦ರಲ್ಲಿ ಲಾಡರ್ ಒಂದಿಗೆ ೧೬ನೇ ವರ್ಷದ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ೨೦೦೫ರಲ್ಲಿ, ಆಕೆ ಸಲೋನಿ, ಮೆಕ್ಸಿಕೊದ ಲಿವರ್‌ಪೂಲ್ ಡಿಪಾರ್ಟ್ಮೆಂಟ್ ಸ್ಟೋರ್ಸ್ ಮತ್ತು ಲ್ಯಾನ್ಸೆಲ್ ಮೊದಲಾದವುಗಳಿಗೆ ರೂಪದರ್ಶಿಯಾಗಿದ್ದಾರೆ. ಆಕೆ ೨೦೦೬ರಲ್ಲಿ ಜೋರ್ಡಾಚೆ, ಶಿಯಾಟ್ಜಿ ಚೆನ್, ಗಾಟ್ ಮಿಲ್ಕ್?, ಪ್ಯಾಟ್ರಿಕ್ ಕಾಕ್ಸ್, ಸ್ವೀಡನ್‌ನ ಕ್ಲೋತಿಯರ್ಸ್ ಮತ್ತು ಲ್ಯಾನ್ಸೆಲ್ ಹಾಗೂ ೨೦೦೭ರಲ್ಲಿ ಮಾನ್ಸೂನ್ ಮೊದಲಾದವುಗಳ ನಿಯತಕಾಲಿಕ ಜಾಹೀರಾತು ಕಾರ್ಯಗಳ ಭಾಗವಾಗಿದ್ದರು. ೨೦೦೮ರಲ್ಲಿ, ಹರ್ಲಿ ಬ್ಲ್ಯಾಕ್‌ಗ್ಲಾಮ ಮಿಂಕ್‌ಗೆ ನಿಯತಕಾಲಿಕ ಕಾರ್ಯಾಚರಣೆಯ ಮುಖ್ಯಸ್ಥೆಯಾಗಿ ಪ್ರಕಟಿಸಲ್ಪಟ್ಟರು. ೨೦೦೯ರಲ್ಲಿ, ಆಕೆ ರೊಸಾಟೊ ಆಭರಣದ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಪ್ರತಿ ಬೇಸಿಗೆಯಲ್ಲಿ ಆಕೆಯೂ ರೂಪದರ್ಶಿಯಾಗಿ ಕಾಣಿಸಿಕೊಳ್ಳುವ ಎಲಿಜಬೆತ್ ಹರ್ಲಿ ಬೀಚ್ ಎಂಬ ಆಕೆಯ ಕಿನಾರೆ-ಉಡುಪು ನಮೂನೆಯು ೨೦೦೫ರ ಎಪ್ರಿಲ್‌ನಲ್ಲಿ UKಯ ಹ್ಯಾರಡ್ಸ್‌ನಲ್ಲಿ ಬಿಡುಗಡೆಗೊಂಡಿತು. ನಂತರ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳ ಸ್ಯಾಕ್ಸ್ ಫಿಫ್ತ್ ಅವೆನ್ಯೂ ಮಳಿಗೆಗಳಲ್ಲಿ ಮಾರಾಟವಾಗಲು ಆರಂಭವಾಯಿತು. ಟಾಟ್ಲರ್ ನಿಯತಕಾಲಿಕದಲ್ಲಿ ಆಕೆ ಹೀಗೆಂದು ಹೇಳಿದ್ದಾರೆ - 'ಫ್ಯಾಷನ್ ಚಿತ್ರೀಕರಣಕ್ಕಾಗಿ ನಾನು ನೆಕರ್ ದ್ವೀಪದಲ್ಲಿದ್ದೆ. ಅಲ್ಲಿ ರಿಚಾರ್ಡ್ ಬ್ರ್ಯಾನ್ಸನ್ ಸಹ ಇದ್ದರು, ಆತ ಜೋಲಿಗೆಯಲ್ಲಿ ಮಲಗಿಕೊಂಡು ಫೋನ್‌ನಲ್ಲಿ ಮಾತನಾಡಿ ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದರು. ಆದರೆ ನಾನು ರಜಾದಿನದಲ್ಲಿ ಮನೆಗೆ ಹೋಗುತ್ತಿಲ್ಲ, ಏಕಾಂಗಿಯಾಗಿ ಈ ದ್ವೀಪದಲ್ಲಿದ್ದೇನೆ, ವೃತ್ತಿಜೀವನವನ್ನು ಆರಂಭಿಸುವುದಕ್ಕಿಂತ ಮೊದಲು ಡ್ಯಾಮಿಯನ್‌ನ ಶಾಲೆಯ ದಿನಗಳಲ್ಲಿ ಯಾವುದೇ ಅಡ್ಡಿಯಿಲ್ಲದೆ ಎಲ್ಲವನ್ನೂ ಮಾಡುತ್ತಿದ್ದೆ ಎಂದು ನಾನು ಚಿಂತಿಸಿದೆ.' ೨೦೦೮ರ ಮೇಯಲ್ಲಿ, ಹರ್ಲಿ ಸ್ಪ್ಯಾನಿಶ್ ಉಡುಪಿನ ಬ್ರ್ಯಾಂಡ್ ಮ್ಯಾಂಗೊಗಾಗಿ ೧೨ ಈಜುಡುಗೆಗಳ ಸಂಕ್ಷಿಪ್ತ ಸಂಗ್ರಹವನ್ನು ವಿನ್ಯಾಸಗೊಳಿಸಿ, ರೂಪದರ್ಶಿಯಾಗಿ ಪ್ರದರ್ಶಿಸಿದರು. ಹರ್ಲಿ ಬ್ರಿಟಿಷ್ ವೋಗ್ಯೂ ದ ಮುಖಪುಟದಲ್ಲಿ ಮೂರು ಬಾರಿ ಕಾಣಿಸಿಕೊಂಡರು. ಆಕೆ ಲಂಡನ್‌ನ ಇಂಡಿಪೆಂಡೆಂಟ್ ಮಾಡೆಲಿಂಗ್ ಏಜೆನ್ಸಿಗೆ ಸಹಿಹಾಕಿದ್ದಾರೆ. === ಚಲನಚಿತ್ರ === ಹರ್ಲಿ ಮೊದಲ ಬಾರಿಗೆ ಏರಿಯಾ ಚಲನಚಿತ್ರದಲ್ಲಿ (೧೯೮೭) ಕಾಣಿಸಿಕೊಂಡರು. ಅನಂತರ ಆಕೆ ಪ್ಯಾಸೆಂಜರ್ ೫೭ , , ಬೆಡಾಜ್ಲೆಡ್ ಮತ್ತು ಸರ್ವಿಂಗ್ ಸಾರ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ೧೯೯೭ರಲ್ಲಿ, ಆಕೆ ಗೂಢಚಾರ ಅಣಕದಲ್ಲಿನAustin : ಪಾತ್ರಕ್ಕಾಗಿ ತನ್ನ ಮೊದಲ ಮತ್ತು ಏಕೈಕ ನಟನಾ ಪ್ರಶಸ್ತಿ ಶೊವೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ ಆಫ್ ದಿ ಯಿಯರ್ಅನ್ನು ಪಡೆದರು. ಹಘ್ ಗ್ರ್ಯಾಂಟ್ ೧೯೯೪ರಲ್ಲಿ ಸಿಮಿಯನ್ ಫಿಲ್ಮ್ಸ್‌ನ ನಿರ್ದೇಶಕರಾದಾಗ, ಹರ್ಲಿ ಎಕ್ಸ್‌ಟ್ರೀಮ್ ಮೆಶರ್ಸ್ (೧೯೯೬) ಮತ್ತು ಮಿಕಿ ಬ್ಲೂ ಐಸ್ (೧೯೯೯) ಎಂಬ ಈ ಕಂಪನಿಯ ಎರಡು ಗ್ರ್ಯಾಂಟ್ ಚಲನಚಿತ್ರಗಳ ನಿರ್ಮಾಪಕರಲ್ಲಿ ಒಬ್ಬರಾದರು. ೨೦೦೦ರಲ್ಲಿ, ಆಕೆ ಎಸ್ಟೀ ಲಾಡರ್ ಜಾಹೀರಾತಿನ ಚಿತ್ರೀಕರಣವನ್ನು ಮಾಡಲು ಐದು ತಿಂಗಳ ನಟನಾ ನಿರ್ಬಂಧವನ್ನು ಮುರಿದುದಕ್ಕಾಗಿ ಬಹಿರಂಗವಾಗಿ ಟೀಕಿಸಲ್ಪಟ್ಟರು, ಇದಕ್ಕಾಗಿ ಆಕೆಗೆ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ $೧೦೦,೦೦೦ (೨೦೦೦ರಲ್ಲಿ £೭೦,೦೦೦) ದಂಡವನ್ನು ವಿಧಿಸಿತು ಮತ್ತು ಪ್ರತಿಭಟನಾಕಾರರು ಆಕೆಯನ್ನು "ಎಲಿಜಬೆತ್ ಸ್ಕ್ಯಾಬ್ಲಿ" ಎಂದು ಕರೆದರು. === ದೂರದರ್ಶನ === ೧೯೮೦ರ ಉತ್ತರಾರ್ಧದಲ್ಲಿ, ಹರ್ಲಿ ಐದು-ಭಾಗದ ದೂರದರ್ಶನ ನಾಟಕ ಕ್ರಿಸ್ಟ್ಯಾಬೆಲ್ ‌ನಲ್ಲಿ ಶೀರ್ಷಿಕೆ ಪಾತ್ರವನ್ನು ಅಭಿನಯಿಸಿದರು. ಜಾನ್ ಕ್ಲೀಸೆಯ ದಿ ಹ್ಯೂಮನ್ ಫೇನ್ ‌ನಲ್ಲಿ (೨೦೦೧) ನಟಿಸಿದ ನಂತರ ಆಕೆ ೨೦೦೬ರಲ್ಲಿ Sky೧ರಲ್ಲಿ ಬ್ರಿಟಿಷ್ ರಿಯಾಲಿಟಿ ಸರಣಿ ಪ್ರಾಜೆಕ್ಟ್ ಕ್ಯಾಟ್‌ವಾಕ್ ‌ನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದರು. ಆ ಶೊ ಕಾರ್ಯಕ್ರಮವು ಅಷ್ಟೊಂದು ಉತ್ಸಾಹವಿಲ್ಲದ ರೇಟಿಂಗ್ ಪಡೆಯಿತು, ಕೇವಲ ೧%ನಷ್ಟು ಕೇಳುಗರು ಮಾತ್ರ ಮೊದಲ ಅದರ ಕೆಲವು ಎಪಿಸೋಡುಗಳನ್ನು ವೀಕ್ಷಿಸಿದರು. ಹರ್ಲಿ ಹೆಚ್ಚುಕಡಿಮೆ ಜಾಗತಿಕವಾಗಿ ಒಬ್ಬ ನಿರೂಪಕಿಯಾಗಿ ಹೆಸರುವಾಸಿಯಾದರು. ಕಾಸ್ಮೊಪೊಲಿಟನ್ ನಿಯತಕಾಲಿಕದ ಮಾಜಿ ಸಂಪಾದಕ ಮಾರ್ಸೆಲ್ಲೆ ಡಿಆರ್ಗಿ ಸ್ಮಿತ್ ಆಕೆಯು 'ತಿರಸ್ಕಾರದಿಂದ ಬೇಸರ ತರಿಸುತ್ತಾಳೆಂದು' ಹೇಳಿದರು ಮತ್ತು ಅಲ್ಲದೆ ಆತ ಹೀಗೆಂದು ಟೀಕಿಸಿದರು - 'ಲಿಜ್ ಹರ್ಲಿಗೆ ಫ್ಯಾಷನ್ ಅನುಭವವಿಲ್ಲ. ಆಕೆ ಸಾಧಾರಣ ಉಡುಪನ್ನು ಧರಿಸಿಕೊಂಡು ಪ್ರಥಮಪ್ರದರ್ಶನಗಳಿಗೆ ಬರುತ್ತಾರೆ.' ನ ಡಿಲನ್ ಜೋನ್ಸ್ ಆಕೆಯು ಫ್ಯಾಷನ್ ಜಗತ್ತಿನಲ್ಲಿ ಒಬ್ಬ ಹೆಸರಾಂತ ಮಹಿಳೆಯಾಗಿದ್ದಾರೆಂದು ಆಕೆಯ ಪರವಾಗಿ ಮಾತನಾಡಿದರು. ಹರ್ಲಿಯ 'ಹೆಬ್ಬಯಕೆಯುಳ್ಳ ಬ್ಯಾಸಿಂಗ್‌ಸ್ಟೋಕ್-ಆಗಿಹೋದ ಜೆಟ್ ವರ್ಗದ ಮಾತಿನ ರೀತಿಗಾಗಿ ಮತ್ತು ಸತ್ತ್ವಹೀನ ದೃಷ್ಟಿ'ಗಾಗಿ ವಿಮರ್ಶಕರು ಆಕೆಯನ್ನು ಅಪಹಾಸ್ಯ ಮಾಡಿದರು. ಅಲ್ಲದೆ ಕೆಲವರು ಆಕೆಯನ್ನು ನಿಸ್ತೇಜ, ಚೆನ್ನಾಗಿಲ್ಲದ ನಿರೂಪಕಿಯೆಂದು ಕರೆದರು. ಆಕೆಯ ಮೇಲಾಧಿಕಾರಿಗಳು ಆಕೆ ತುಂಬಾ ಭಾವರಹಿತವಾದವಳೆಂದು ಭಾವಿಸಿದರಿಂದ ಒಂದು ಕಾರ್ಯಕ್ರಮದ ನಂತರ ಆಕೆಯನ್ನು ಬಿಟ್ಟುಬಿಡಲಾಯಿತು. ಹರ್ಲಿಯು ಸ್ಪರ್ಧಿಗಳಲ್ಲಿ ಉಡುಪುಗಳನ್ನು ಯಾರಿಗೂ ತಿಳಿಯದಂತೆ ತನಗೆ ನೀಡುವಂತೆ ಕೇಳುತ್ತಿದ್ದರೆಂದು ನಂತರ ಬಹಿರಂಗವಾಯಿತು. ಹರ್ಲಿ NBCಯ ವಂಡರ್ ವುಮನ್ ‌ನಲ್ಲಿ ಖಳನಾಯಕಿ ವೆರೋನಿಕ ಕ್ಯಾಲೆಯ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ. === ಉದಾರತೆ === ಹರ್ಲಿ ಎಸ್ಟೀ ಲಾಡರ್‌ನ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದ್ದಾರೆ, ಅದರ ಭಾಗವಾಗಿ ಈ ಕಂಪನಿಯು "ಎಲಿಜಬೆತ್ ಪಿಂಕ್" ಲಿಪ್‌ಸ್ಟಿಕ್ಅನ್ನು ತಯಾರಿಸಿದೆ, ಇದರ ಮಾರಾಟದಿಂದ ಬರುವ ಲಾಭವನ್ನು ಸ್ತನ ಕ್ಯಾನ್ಸರ್ ಸಂಶೋಧನಾ ಸಂಸ್ಥೆಗೆ ನೀಡಲಾಗುತ್ತದೆ. ಆಕೆಯ ಅಜ್ಜಿಯು ಸ್ತನ ಕಾನ್ಸರ್‌ನಿಂದ ಸಾವನ್ನಪ್ಪಿದರು. ಹರ್ಲಿಯು ಸ್ತನ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವದಂದು ನಡೆಸಲಾದ 'ದಿ ಹಾಟ್ ಪಿಂಕ್ ಪಾರ್ಟಿ'ಯ ಮುಖ್ಯಸ್ಥೆಯಾಗಿದ್ದರು. ಹರ್ಲಿ ೨೦೦೩ರ ಫ್ಯಾಷನ್ ರಾಕ್ಸ್ ಕಾರ್ಯಕ್ರಮದ ಸಹ-ನಿರೂಪಕಿಯಾಗುವ ಮೂಲಕ ಮತ್ತು ೨೦೦೪ರಲ್ಲಿ ಗೆಟ್ ಇನ್ಟು ಕುಕಿಂಗ್ ಯುವ ಪ್ರವರ್ತನ ಶಕ್ತಿಯನ್ನು ಆರಂಭಿಸಲು ಸಹಾಯ ಮಾಡುವ ಮೂಲಕ ದಿ ಪ್ರಿನ್ಸಸ್ ಟ್ರಸ್ಟ್‌ಗೆ ಬೆಂಬಲವನ್ನು ನೀಡಿದರು. ಅಷ್ಟೇ ಅಲ್ಲದೆ ಆಕೆ ಎಂಡರ್ ಹಂಗರ್ ನೆಟ್ವರ್ಕ್ ಮಕ್ಕಳ ದತ್ತಿಸಂಸ್ಥೆ ಮತ್ತು ಶೌಕತ್ ಖಾನುಮ್ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮೊದಲಾದವುಗಳಿಗೆ ಹಣ ಸಂಗ್ರಹಿಸುವಲ್ಲಿ ಸಹಾಯ ಮಾಡಿದರು. == ವೈಯಕ್ತಿಕ ಜೀವನ == ಹರ್ಲಿ ೧೯೮೭ರಲ್ಲಿ ಜನಪ್ರಿಯತೆಗಾಗಿ ಕಷ್ಟಪಡುತ್ತಿದ್ದ ನಟಿಯಾಗಿದ್ದರು, ಆ ಸಂದರ್ಭದಲ್ಲಿ ಆಕೆ ರಿಮಾಂಡೊ ಆಲ್ ವಿಯೆಂಟೊ ಎಂಬ ಸ್ಪ್ಯಾನಿಶ್ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದ ಹಘ್ ಗ್ರ್ಯಾಂಟ್‌ರನ್ನು ಭೇಟಿಯಾದರು. ಹರ್ಲಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಗ ಗ್ರ್ಯಾಂಟ್ ೧೯೯೫ರಲ್ಲಿ ವೇಶ್ಯೆಯ ಕಾಮಕೇಳಿಗಾಗಿ ಆಹ್ವಾನಿಸಿದುದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಪಡೆದರು. ಹರ್ಲಿ ಆತನನ್ನು ಸಮರ್ಥಿಸಿದರು ಮತ್ತು ಆತನ ಚಿತ್ರ ನೈನ್ ಮಂತ್ಸ್ ‌ನ ಪ್ರಥಮಪ್ರದರ್ಶನದಲ್ಲಿ ಆತನಿಗೆ ಜತೆನೀಡಿದರು. ೧೩ ವರ್ಷಗಳ ಕಾಲ ಜೊತೆಯಾಗಿದ್ದ ಹರ್ಲಿ ಮತ್ತು ಗ್ರ್ಯಾಂಟ್ ೨೦೦೦ರ ಮೇಯಲ್ಲಿ 'ಸೌಹಾರ್ದಯುತ' ಬೇರ್ಪಡುವಿಕೆಯನ್ನು ಘೋಷಿಸಿದರು. ಗಿ ಗಾರ್ಡಿಯನ್ ‌ನ ಪ್ರಕಾರ, ಹರ್ಲಿ ಮತ್ತು ಹಘ್ ಗ್ರ್ಯಾಂಟ್‌ನ ಸಂಬಂಧವು ಎಲ್ಲರ ಗಮನ ಸೆಳೆದಿದ್ದುದರಿಂದ ಆಕೆಯು ಆಗ 'ಹಘ್ ಗ್ರ್ಯಾಂಟ್‌ನ ಪ್ರೇಯಸಿ'ಯೆಂದು ಕರೆಯಲ್ಪಡುತ್ತಿದ್ದರು, ಅದೇ ಈಗ 'ಹಘ್ ಗ್ರ್ಯಾಂಟ್‌ನ ಮಾಜಿ ಪ್ರೇಯಸಿ'ಯೆಂದು ಕರೆಯಲ್ಪಡುತ್ತಿದ್ದಾರೆ. ೨೦೦೨ರ ಎಪ್ರಿಲ್ ೪ರಂದು, ಹರ್ಲಿ ಒಂದು ಗಂಡು ಮಗುವಿಗೆ ಜನ್ಮ ನೀಡಿದರು, ಹೆಸರು ಡ್ಯಾಮಿಯನ್ ಚಾರ್ಲ್ಸ್ ಹರ್ಲಿ. ಆ ಮಗುವಿನ ತಂದೆ ಸ್ಟೀವ್ ಬಿಂಗ್ ೨೦೦೧ರಲ್ಲಿ ತಾನು ಮತ್ತು ಹರ್ಲಿ ಕೇವಲ ಅಲ್ಪಾವಧಿಯ ಸಂಬಂಧವನ್ನು ಹೊಂದಿದ್ದೆವೆಂದು ಆಪಾದಿಸುವ ಮೂಲಕ ಆ ಮಗುವಿನ ತಂದೆ ತಾನಲ್ಲವೆಂದು ಹೇಳಿದರು. ಆದರೆ ಪರೀಕ್ಷೆಯು ಬಿಂಗ್ ಆ ಮಗುವಿನ ತಂದೆಯೆಂಬುದನ್ನು ಸ್ಪಷ್ಟಪಡಿಸಿತು. ಹರ್ಲಿ ಪ್ಯಾಟ್ಸಿ ಕೆನ್ಸಿಟ್‌ರ ಮಗ ಲೆನ್ನನ್‌ಗೆ ಹಾಗೂ ಡೇವಿಡ್ ಬೆಕ್ಹ್ಯಾಮ್ ಮತ್ತು ವಿಕ್ಟೋರಿಯ ಬೆಕ್ಹ್ಯಾಮ್‌ರ ಇಬ್ಬರು ಗಂಡುಮಕ್ಕಳಿಗೆ (ಬ್ರೂಕ್ಲಿನ್ ಮತ್ತು ರೋಮಿಯೊ) ಅಜ್ಜಿಯಾಗಿದ್ದಾರೆ. ೨೦೦೨ರ ಉತ್ತರಾರ್ಧದಲ್ಲಿ, ಹರ್ಲಿ ಭಾರತೀಯ ಜವಳಿ ಉದ್ಯಮಿ ಅರುಣ್ ನಾಯರ್ ಒಂದಿಗೆ ಡೇಟಿಂಗ್ ಮಾಡಲು ಆರಂಭಿಸಿದರು, ಆತ ೧೯೯೮ರಿಂದ ಒಂದು ಸಣ್ಣ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದಾರೆ. ೨೦೦೭ರ ಮಾರ್ಚ್‌ ೨ರಂದು, ಹರ್ಲಿ ಮತ್ತು ನಾಯರ್ ಸುಡೆಲಿ ಕ್ಯಾಸಲ್‌ನಲ್ಲಿ ವಿವಾಹವಾದರು. ನಂತರ ಭಾರತದ ಜೋಧ್ಪುರ್‌ನ ಉಮೇದ್ ಭವನ್ ಪ್ಯಾಲೇಸ್‌ನಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕವಾಗಿ ಹಿಂದು ಶೈಲಿಯಲ್ಲಿ ಮದುವೆಯಾದರು. ಭಾರತದಲ್ಲಿ ನಾಗೂರ್ ಫೋರ್ಟ್‌ನಲ್ಲಿ ಸಂಗೀತ್ ಮತ್ತು ಮೆಹ್ರಾನ್‌ಗರ್ ಫೋರ್ಟ್‌ನಲ್ಲಿ ಆರತಕ್ಷತೆಯನ್ನು ನಡೆಸಲಾಯಿತು. ಈ ಮದುವೆ ಸಮಾರಂಭದ ಫೋಟೋಗಳನ್ನು ಹೆಲೊ! ನಿಯಕಾಲಿಕಕ್ಕೆ ಸುಮಾರು £೨ ದಶಲಕ್ಷಕ್ಕೆ ಮಾರಾಟ ಮಾಡಲಾಯಿತು. ಈ ಸಮಾರಂಭಗಳಲ್ಲಿ ಹರ್ಲಿಯನ್ನು ಬಿಟ್ಟುಬಿಟ್ಟಿದ್ದ ಎಲ್ಟನ್ ಜಾನ್‌‌ರನ್ನೂ ಒಳಗೊಂಡಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ೨೦೦೩ರಲ್ಲಿ ಹರ್ಲಿಯು £೧೩ ದಶಲಕ್ಷದಷ್ಟು ಒಟ್ಟು ಆಸ್ತಿಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಆಕೆ ಗ್ಲೌಸೆಸ್ಟೆರ್ಶೈರ್‌ನ ಬಾರ್ನ್ಸ್‌ಸ್ಲೆಯ ಒಂದು 400- (1.6 km2) ಸುವ್ಯವಸ್ಥಿತ ಫಾರ್ಮ್‌ನಲ್ಲಿ ತನ್ನ ಮಗ ಮತ್ತು ಪತಿಯೊಂದಿಗೆ ವಾಸಿಸುತ್ತಿದ್ದಾರೆ. ೨೦೧೦ರ ಡಿಸೆಂಬರ್ ೧೨ರಂದು, ಆಸ್ಟ್ರೇಲಿಯಾದ ಕ್ರಿಕೆಟಿಗ ಶಾನೆ ವಾರ್ನೆಯೊಂದಿಗೆ ಆಕೆಯನ್ನು ರೊಮ್ಯಾಂಟಿಕ್ ಆಗಿ ಸಂಬಂಧ ಕಲ್ಪಿಸಿ ಬರೆದ ಮಾಧ್ಯಮದ ವರದಿಗಳಿಗೆ ಪ್ರತ್ಯುತ್ತರವಾಗಿ ಹರ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ತಾನು ಮತ್ತು ತನ್ನ ಪತಿ ಅರುಣ್ ಕೆಲವು ತಿಂಗಳ ಹಿಂದೆ ಬೇರ್ಪಟ್ಟಿರುವುದಾಗಿ ಘೋಷಿಸಿದರು. ನಾಯರ್‌ನ 'ಅವಿವೇಕದ ವರ್ತನೆ'ಯನ್ನು ಕಾರಣವಾಗಿ ಉಲ್ಲೇಖಿಸಿ ಹರ್ಲಿ ೨೦೧೧ರ ಎಪ್ರಿಲ್ ೨ರಂದು ವಿವಾಹ ವಿಚ್ಛೇದನೆಗೆ ಅರ್ಜಿ ಸಲ್ಲಿಸಿದರು. ಹರ್ಲಿ ಕನ್ಸರ್ವೇಟಿವ್ ಪಕ್ಷದ ಬೆಂಬಲಿಗರಾಗಿದ್ದಾರೆ ಮತ್ತು ಅದರ ೨೦೧೦ರ ಬಂಡವಾಳ ಸಂಗ್ರಹಿಸುವ ನೃತ್ಯಗೋಷ್ಠಿಯಲ್ಲಿ ಆಕೆ ಭಾಗವಹಿಸಿದರು. == ಇವನ್ನೂ ಗಮನಿಸಿ‌ == ಎಲಿಜಬೆತ್ ಹರ್ಲಿಯ ಕಪ್ಪು ವರ್ಸೇಸ್ ಉಡುಪು == ಚಲನಚಿತ್ರ ಪಟ್ಟಿ == ನಾಟಕ/ರಂಗಕ್ಷೇತ್ರ ದಿ ಚೆರ್ರಿ ಆರ್ಕರ್ಡ್ - ಎ ಜ್ಯುಬಿಲಿ (ರಷ್ಯನ್ ಆಂಟ್ ಸೋವಿಯಟ್ ಆರ್ಟ್ಸ್ ಫೆಸ್ಟಿವಲ್) ದಿ ಮ್ಯಾನ್ ಮೋಸ್ಟ್ ಲೈಕ್ಲಿ ಟು (ಮಿಡ್ಲ್ ಈಸ್ಟ್ ಟೂರ್) ಸಾಕ್ಷ್ಯಚಿತ್ರ ಸೈನ್ ಚಾನೆಲ್ (೨೦೦೫) ... ಸ್ವಯಂ ಆಕೆಯೇ ಪಾತ್ರ : (೨೦೦೮) ... ಸ್ವಯಂ ಆಕೆಯೇ ಪಾತ್ರ == ಉಲ್ಲೇಖಗಳು‌‌ == == ಬಾಹ್ಯ ಕೊಂಡಿಗಳು‌‌ == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ